ಅರ್ಥಾಂಗಿಗಳು ಅಂದ್ರೆ ಅರ್ಥಪೂರ್ಣವಾಗಿರುವ ಅಂಗಿಗಳು - ಅಂದರೆ ಕನ್ನಡ ನುಡಿಮುತ್ತುಗಳನ್ನು ಬರೆದಿರುವಂಥಾ ಅಂಗಿಗಳು.ಎಲ್ಲರಿಗೂ ಅರ್ಥವಾಗೋ ಹಾಗೆ ಹೇಳಬೇಕೆಂದರೆ ’ಕನ್ನಡ ಮೆಸೇಜಿರುವ ಟಿಶರ್ಟು’ಗಳು.
ಬೆಂಗಳೂರಿನಲ್ಲಿ ಬರುವ ಶುಕ್ರವಾರದಿಂದ ಶುರುವಾಗುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ಅರ್ಥಾಂಗಿಗಳು ತಯಾರಾಗಿವೆ. ಈ ಅರ್ಥಾಂಗಿಗಳು ಎರಡು ತರಹಗಳಲ್ಲಿವೆ : ಕಾಲರ್ ಇರುವ ಅರ್ಥಾಂಗಿ ಮತ್ತು ದುಂಡು ಕತ್ತಿನ ಅರ್ಥಾಂಗಿ.
ಕಾಲರ್ ಇರುವ ಅರ್ಥಾಂಗಿಗೆ ಎದೆಯ ಮೇಲೆ "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ಎಂಬ ಘೋಷವಾಕ್ಯವಿದೆ. ಬೆನ್ನ ಮೇಲೆ "ಡಾ|ಕುವೆಂಪು", "ಡಾ|ಬೇಂದ್ರೆ" ಅಥವಾ "ಕೋಟ್-೧" ವಿನ್ಯಾಸಗಳಲ್ಲಿ ಒಂದು ವಿನ್ಯಾಸವಿದೆ.
ಉದಾಹರಣೆಗೆ "ಡಾ|ಕುವೆಂಪು" ವಿನ್ಯಾಸದ ಬಿಳಿ ಬಣ್ಣದ ಕಾಲರ್ ಇರುವ ಅರ್ಥಾಂಗಿ ಹೀಗಿದೆ:

ಹಿಂಭಾಗ |
ದುಂಡು ಕತ್ತಿನ ಅರ್ಥಾಂಗಿಗೆ ಮುಂಭಾಗದಲ್ಲಿ ಏಳು ವಿನ್ಯಾಸಗಳಲ್ಲಿ ಒಂದು ವಿನ್ಯಾಸವಿದೆ, ಹಿಂಬದಿಯಲ್ಲಿ ಯಾವುದೇ ವಿನ್ಯಾಸವಿಲ್ಲ.
ಅರ್ಥಾಂಗಿ ವಿನ್ಯಾಸಗಳು:
೧. "ಡಾ|ರಾಜ್"
೨."ಡಾ|ವಿಷ್ಣು":
೩. "ಡಾ|ಬೇಂದ್ರೆ"
೫. "ಕೋಟ್-೧"
೬. "ಕೋಟ್-೨"
೭. "ಕೋಟ್-೩"
ಕೆಂಪು,ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಅರ್ಥಾಂಗಿಗಳು ಲಭ್ಯವಿವೆ.
ಕನ್ನಡದ ಜಾತ್ರೆಗೆ ಬರುವ ನೀವು, "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ವನ್ನು ಧರಿಸಿಕೊಂಡು ಹೋಗಿ ಎಂಬ ಆಗ್ರಹ ನಮ್ಮದು.
(ಅರ್ಥಾಂಗಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೯೮೪೫೦೦೪೭೮೨ ಅಥವಾ ariveguru4u@gmail.com ಗೆ ಸಂಪರ್ಕಿಸಬಹುದು.)
T-SHIRT QUOTE
ಪ್ರತ್ಯುತ್ತರಅಳಿಸಿಕನ್ನಡ
IF U CAN'T READ THIS THEN ARE
AT THE WRONG PLACE
ಧನ್ಯವಾದಗಳು